CHICKMAGALUR The District Website
date

 

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರ

 

ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ  ನೆರವಿನಿಂದ ರಾಜ್ಯದ ಬಡ ಜನತೆಗಾಗಿ ಅದರಲ್ಲೂ ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ನಿರ್ಗತಿಕ, ದುರ್ಬಲ ಕುಟುಂಬಗಳಿಗೆ ಮತ್ತು ವಯೋವೃದ್ಧರಿಗೆ ಕಡಿಮೆ ದರದಲ್ಲಿ ಒಂದು ರೂಪಾಯಿಗೆ 1ಕೆ.ಜಿ. ಅಕ್ಕಿ/ಗೋಧಿ ನೀಡುವ  ಅನ್ನಭಾಗ್ಯ ಯೋಜನೆಯನ್ನು ಇಲಾಖೆಯಿಂದ ಪರವಾನಗಿ ಹೊಂದಿದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ. ಜನತೆಗೆ ಕನಿಷ್ಠ ಮಟ್ಟದ ಆಹಾರ ಭದ್ರತೆಯನ್ನು  ಒದಗಿಸಲು ಆಹಾರಧಾನ್ಯಗಳನ್ನು ಪೂರೈಸುವುದರ ಮೂಲಕ ನಿರ್ದಿಷ್ಟ ಗುರಿಯುಳ್ಳ ಸಾರ್ವಜನಿಕ ವಿತರಣಾ ಪದ್ಧತಿಯನ್ನು ಒಂದು ಮುಖ್ಯವಾದ ಮೂಲಭೂತ ವ್ಯವಸ್ಥೆಯಾಗಿ ಪರಿಗಣಿಸಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪ್ರಮುಖವಾಗಿ ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಅಗತ್ಯವಸ್ತುಗಳನ್ನು ನ್ಯಾಯಯುತವಾದ ಬೆಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹೊಂದಿರುವ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿಗಳಿಗೆ ಅಕ್ಕಿ, ಗೋಧಿ ಹಾಗೂ ಸಕ್ಕರೆಯನ್ನು ಹಾಗೂ ಅಡುಗೆ ಅನಿಲರಹಿತ ಕಾರ್ಡುದಾರರಿಗೆ ನೀಲಿ ಸೀಮೆಎಣ್ಣೆಯನ್ನು ವಿತರಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ. ಬೆಲೆ ಏರಿಕೆ ಮತ್ತು ಕಾಳಸಂತೆಯನ್ನು ನಿಯಂತ್ರಿಸುವುದು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಅರ್ಹ  ಫಲಾನುಭವಿಗಳಿಗೆ ಬಯೋಮೆಟ್ರಿಕ್ ಪಡೆದು ಪಡಿತರ ಚೀಟಿ ವಿತರಿಸುವುದು, ನ್ಯಾಯಬೆಲೆ ಅಂಗಡಿಗಳ ತಪಾಸಣೆ, ಸಗಟು ಆಹಾರಧಾನ್ಯ/ ಸೀಮೆಎಣ್ಣೆ ಮಳಿಗೆಗಳ ತಪಾಸಣೆ, ಲೆವಿ ಸಂಗ್ರಹಣೆ, ಬೆಂಬಲ ಬೆಲೆ ಕಾರ್ಯಾಚರಣೆಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರು, ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಆಹಾರ  ಇಲಾಖೆಯ ಸಿಬ್ಬಂದಿಗಳ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.

ನಿರ್ದಿಷ್ಟ ಗುರಿಯುಳ್ಳ ಸಾರ್ವಜನಿಕ ವಿತರಣಾ ಪದ್ಧತಿ:
ನಿರ್ದಿಷ್ಟ ಗುರಿಯುಳ್ಳ ಸಾರ್ವಜನಿಕ ವಿತರಣಾ ಪದ್ಧತಿಯನ್ನು ಕೇಂದ್ರ ಸರ್ಕಾರವು ಜೂನ್ 1997ರಲ್ಲಿ ಜಾರಿಗೆ ತಂದಿರುತ್ತದೆ.  ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟ ಗುರಿಯುಳ್ಳ ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪಡಿತರ ವಸ್ತುಗಳ ವಿತರಣೆಯನ್ನು ಹಾಗೂ ಇತರೆ ಎಲ್ಲಾ ಕುಟುಂಬಗಳಿಗೆ ಆಹಾರಭದ್ರತೆಯನ್ನು ಒದಗಿಸಲು ಇಲಾಖೆಯು ಕಾರ್ಯ ನಿರ್ವಹಿಸುತ್ತದೆ. ಹಾಲಿ ವಿವಿಧ ವರ್ಗದ  ಪಡಿತರ ಚೀಟಿಗಳಿಗೆ ವಿತರಿಸುತ್ತಿರುವ ಆಹಾರಧಾನ್ಯ ಹಾಗೂ ಸೀಮೆಎಣ್ಣೆ ಪ್ರಮಾಣ ಈ ಕೆಳಕಂಡಂತಿರುತ್ತದೆ.

1)ಆಹಾರಧಾನ್ಯ:


ಕ್ರ.
ಸಂ.

ಪಡಿತರ ಚೀಟಿ ವರ್ಗ

ಅಕ್ಕಿ

ಗೋಧಿ

ವಿತರಣಾ ಪ್ರಮಾಣ

ದರ (ಪ್ರತಿ ಕೆ.ಜಿ.ಗೆ ರೂ.ಗಳಲ್ಲಿ)

ವಿತರಣಾ ಪ್ರಮಾಣ

ದರ (ಪ್ರತಿ ಕೆ.ಜಿ.ಗೆ ರೂ.ಗಳಲ್ಲಿ)

1

ಅಂತ್ಯೋದಯ

29ಕೆ.ಜಿ.

1.00

06ಕೆ.ಜಿ.

1.00

2

ಬಿಪಿಎಲ್

ಏಕ ಸದಸ್ಯ 

08ಕೆ.ಜಿ.

1.00

ಏಕ ಸದಸ್ಯ 

02ಕೆ.ಜಿ.

1.00

ದ್ವಿ ಸದಸ್ಯ

16ಕೆ.ಜಿ.

ದ್ವಿ ಸದಸ್ಯ

04ಕೆ.ಜಿ.

ಮೂರು ಮತ್ತು ಹೆಚ್ಚಿನ ಸದಸ್ಯರು

24ಕೆ.ಜಿ.

ಮೂರು ಮತ್ತು ಹೆಚ್ಚಿನ ಸದಸ್ಯರು

06ಕೆ.ಜಿ.

ಸಕ್ಕರೆ ಪ್ರತಿ ಎಎವೈ/ಬಿಪಿಎಲ್ ಕಾರ್ಡಿಗೆ  1ಕೆ.ಜಿ. (ದರ ಪ್ರತಿ ಕೆ.ಜಿ.ಗೆ ರೂ.13.50)

 

2)ಸೀಮೆಎಣ್ಣೆ: (ದರ ಪ್ರತಿ ಲೀಟರ್  ಗೆ ರೂ.17.50)

 • ಏಕಸದಸ್ಯ, ದ್ವಿಸದಸ್ಯ ಎಎವೈ/ಬಿಪಿಎಲ್ ಪಡಿತರ ಚೀಟಿಗಳಿಗೆ 3ಲೀ.
 • ಮೂರು ಮತ್ತು ಹೆಚ್ಚಿನ ಸದಸ್ಯರಿಗೆ ಎಎವೈ/ಬಿಪಿಎಲ್ ಪಡಿತರ ಚೀಟಿಗಳಿಗೆ 5ಲೀ.
 • ಎಪಿಎಲ್ ಪಡಿತರ ಚೀಟಿಗಳಿಗೆ ಪ್ರತಿ ಕಾರ್ಡಿಗೆ 3ಲೀ.

            ಇಲಾಖೆಯಿಂದ ಪರವಾನಗಿ ಪಡೆದ ನ್ಯಾಯಬೆಲೆ ಅಂಗಡಿಗಳು ಫಲಾನುಭವಿ ಕುಟುಂಬಗಳಿಗೆ ಪಡಿತರ ವಸ್ತುಗಳನ್ನು ವಿತರಿಸುವ ಮುಖ್ಯವಾಹಿನಿಗಳಾಗಿದ್ದು ನಿಗದಿತ ದರ ಹಾಗೂ ಪ್ರಮಾಣದಲ್ಲಿ ವಿತರಣಾ ಕಾರ್ಯ ನಿರ್ವಹಿಸುತ್ತವೆ. ಈ ಎಲ್ಲಾ ವಿತರಣಾ ಪದ್ಧತಿಯನ್ನು ಕರ್ನಾಟಕ ಅಗತ್ಯ ವಸ್ತುಗಳ (ಸಾವಿಪ) ನಿಯಂತ್ರಣ ಆದೇಶ 1992ರಡಿ ನಿಯಂತ್ರಿಸಲಾಗುತ್ತಿದೆ. 
ಪ್ರತಿ ಕುಟುಂಬಗಳಿಗೆ ಕುಟುಂಬದ ವಾರ್ಷಿಕ ವರಮಾನವನ್ನು ಪರಿಗಣನೆಗೆ ತೆಗೆದುಕೊಂಡು ಪಡಿತರ ಚೀಟಿ ನೀಡಲು ಸರ್ಕಾರ ಮಾನದಂಡಗಳನ್ನು ನಿಗದಿಪಡಿಸಿದೆ.  ಜಿಲ್ಲೆಯಲ್ಲಿ ಪ್ರಸ್ತುತ 3 ರೀತಿಯ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತಿದೆ.

  • ಬಡವರಲ್ಲಿ ಕಡು ಬಡವರಿಗೆ, ಒಂದು ದಿನದಲ್ಲಿ ಎರಡು ಹೊತ್ತಿನ  ಊಟವಿಲ್ಲದೆ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ಅಂತ್ಯೋದಯ ಅನ್ನ ಪಡಿತರ ಚೀಟಿ ವಿತರಿಸಲಾಗಿದೆ. (ಕೇಂದ್ರ ಸರ್ಕಾರದ ಯೋಜನೆ)
  • ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ (ರಾಜ್ಯ ಸರ್ಕಾರದ ಯೋಜನೆ)
  • ಬಡನ ರೇಖೆಯ ಮೇಲಿನ ಕುಟುಂಬಗಳಿಗೆ ಎಪಿಎಲ್ ಪಡಿತರ ಚೀಟಿ.

      ಬಡ ಕುಟುಂಬಗಳು ಪಡಿತರ ವ್ಯವಸ್ಥೆಯಿಂದ ವಂಚಿತರಾಗುವುದನ್ನು ತಡೆಯುವ ಹಾಗೂ ಅನರ್ಹ ಕುಟುಂಬಗಳು ವ್ಯವಸ್ಥೆಯ ಲಾಭವನ್ನು ಪಡೆಯಬಾರದೆಂಬ ಉದ್ದೇಶದಿಂದ  ಬಿಪಿಎಲ್ ಕುಟುಂಬಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡಿಸುವ  ಉದ್ದೇಶದಿಂದ ಈ ಹಿಂದೆ ನಿಗದಿಪಡಿಸಲಾಗಿದ್ದ ಬಿಪಿಎಲ್ ಮಾನದಂಡಗಳನ್ನು ಸುಧಾರಿಸಿ ಪರಿಷ್ಕರಿಸಲಾಗಿರುತ್ತದೆ.
   ಸರ್ಕಾರ  ಆದೇಶ ಸಂ. ಆನಾಸ:80:ಡಿಆರ್ ಎ:2012 ಬೆಂಗಳೂರು  ದಿನಾಂಕ 24 ಆಗಸ್ಟ್  2012.

   1. ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಎಲ್ಲಾ ಕುಟುಂಬಗಳು.
   2. ಎಲ್ಲಾ ವರ್ಗದ ಸರ್ಕಾರಿ ನೌಕರರು.
   3. ಸರ್ಕಾರಿ ಸ್ವಾಮ್ಯದ  ಉದ್ಯಮಗಳು/ಮಂಡಳಿಗಳು/ನಿಗಮಗಳ ಖಾಯಂ ನೌಕರರು.
   4. ಸ್ವಾಯತ್ತ ಸಂಸ್ಥೆಯ/ಮಂಡಳಿಗಳ ನೌಕರರು.
   5. ಸಹಕಾರ ಸಂಘಗಳ ಖಾಯಂ ಸಿಬ್ಬಂದಿಗಳು.
   6. ವೃತ್ತಿಪರ ವರ್ಗಗಳು, ವೈದ್ಯರುಗಳು, ಆಸ್ಪತ್ರೆಗಳ ನೌಕರರು, ವಕೀಲರುಗಳು,  ಲೆಕ್ಕ ಪರಿಶೋಧಕರು.
   7. ಸೈಕಲ್ ಮೇಲೆ ಅಥವಾ ಗಾಡಿಗಳ ಮೇಲೆ ತಳ್ಳಿಕೊಂಡು ಅಥವಾ ರಸ್ತೆಯ ಪಕ್ಕದಲ್ಲಿ ಕುರಿತು ವ್ಯಾಪಾರ ಮಾಡುವ ಮತ್ತು ತರಕಾರಿ ಮಾತ್ರ ವ್ಯಾಪಾರ ಮಾಡುವ ಹಾಗೂ ಗೂಡಂಗಡಿಗಳಲ್ಲಿ ವ್ಯಾಪಾರ ಮಾಡುವವರನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯಾಪಾರಸ್ಥರು.
   8. 3 ಹೆಕ್ಟೇರ್ (7 ½) ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು.
   9. ಒಂದು ಆಟೋರಿಕ್ಷಾವನ್ನು ಹೊಂದಿ ಸ್ವತ: ಓಡಿಸುತ್ತಿದ್ದು, ಬೇರೆ  ಆದಾಯದ ಮೂಲವಿಲ್ಲದವರನ್ನು ಹೊರತುಪಡಿಸಿ 100ಸಿ.ಸಿ.ಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು (ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ) ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ.
   10. ಅನುದಾನರಹಿತ ಕನ್ನಡ ಶಾಲೆಗಳ ನೌಕರರನ್ನು ಹೊರತುಪಡಿಸಿ ಅನುದಾನಿತ/ಅನುದಾನರಹಿತ ಶಾಲಾ ಕಾಲೇಜುಗಳ ನೌಕರರು.
   11. ನೊಂದಾಯಿತ ಗುತ್ತಿಗೆದಾರರು, ಎ.ಪಿ.ಎಂ.ಸಿ. ಟ್ರೇಡರ್ಸ್/ಕಮಿಷನ್ ಏಜೆಂಟ್ಸ್/ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್.
   12. ಮನೆ/ಮಳಿಗೆ/ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುವವರು.
   13. ಪ್ರತಿ ತಿಂಗಳಿಗೆ ಸರಾಸರಿ ವಿದ್ಯುತ್ ಬಿಲ್ಲು ರೂ.450.00ಕ್ಕಿಂತ ಮೇಲ್ಪಟ್ಟ ಪಾವತಿಸುವ ಕುಟುಂಬಗಳು.
   14. ಬಹುರಾಷ್ಟ್ರೀಯ ಕಂಪೆನಿ, ಉದ್ದಿಮೆ/ಕೈಗಾರಿಕೆಗಳ ನೌಕರರು.

         ಇವರನ್ನು ಹೊರತುಪಡಿಸಿ ಉಳಿದ ಕುಟುಂಬಗಳನ್ನು ಬಿಪಿಎಲ್ ಕಾರ್ಡುಗಳನ್ನು ಹೊಂದಲು ಅರ್ಹ ಕುಟುಂಬವೆಂದು ಪರಿಗಣಿಸುವುದು.

   ನ್ಯಾಯಬೆಲೆ ಅಂಗಡಿಗಳು:
   ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿತ ವಿತರಣಾ ಪದ್ಧತಿ) ನಿಯಂತ್ರಣ  ಆದೇಶ 1992ರಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ  ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆಯಾಗಿ ಪಡಿತರ ಚೀಟಿ ಹೊಂದಿರುವವರಿಗೆ (ಎಎವೈ/ಬಿಪಿಎಲ್) ಆಹಾರಧಾನ್ಯಗಳ ವಿತರಣೆಯ ಜವಾಬ್ದಾರಿ ವಹಿಸಲಾಗಿದೆ. ಪಡಿತರ ಚೀಟಿ ಹೊಂದಿರುವವರ ಅನುಕೂಲ ಮತ್ತು ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಬೆಲೆ ಅಂಗಡಿಗಳ ಸ್ಥಳ ನಿರ್ಧರಿಸಿ ಜಿಲ್ಲಾಡಳಿತದ ವತಿಯಿಂದ ಪ್ರಾಧಿಕಾರ ಮಂಜೂರು ಮಾಡಲಾಗಿರುತ್ತದೆ. 
   ಪ್ರತಿ ನ್ಯಾಯಬೆಲೆ ಅಂಗಡಿಯು ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಹಾಗೂ ಸಂಜೆ 4.00ಗಂಟೆಯಿಂದ ರಾತ್ರಿ 8.00ಗಂಟೆಯವರೆಗೆ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಪ್ರತಿ ಮಂಗಳವಾರ ರಜಾ ದಿನವಾಗಿರುತ್ತದೆ.  ನ್ಯಾಯಬೆಲೆ ಅಂಗಡಿಯ ಮುಂದೆ ಪಡಿತರ ಚೀಟಿದಾರರಿಗೆ ಮಾಹಿತಿಗಾಗಿ ಈ ಕೆಳಕಂಡ ಫಲಕಗಳನ್ನು ಪ್ರದರ್ಶಿಸಬೇಕಾಗಿರುತ್ತದೆ.

   1. ನ್ಯಾಯಬೆಲೆ ಅಂಗಡಿ ನಾಮಫಲಕ
   2. ನ್ಯಾಯಬೆಲೆ ಅಂಗಡಿ ಮಂಜೂರಾತಿ ಸಂಖ್ಯೆ
   3. ವೇಳಾಫಲಕ
   4. ದರ ,ದಾಸ್ತಾನು  ಹಾಗೂ ವಿತರಣಾ ಪ್ರಮಾಣದ ಫಲಕ
   5. ಜಾಗೃತ ಸಮಿತಿ ಸದಸರ ಹೆಸರು ಹಾಗೂ ಮೊಬೈಲ್ ಸಂಖ್ಯೆ
   6. ಟೋಲ್ ಫ್ರೀ ಸಂಖ್ಯೆ  1800-425-9339
   7. ನ್ಯಾಯಬೆಲೆ ಅಂಗಡಿಯ ಬಗ್ಗೆ ದೂರು ನೀಡಬೇಕಾದಲ್ಲಿ ಸಂಪರ್ಕಿಸಬೇಕಾದ ಅಧಿಕಾರಿಯ ಮೊಬೈಲ್ ಸಂಖ್ಯೆ
   8. ಎಲ್ಲಾ  ಪಡಿತರ ವಸ್ತುಗಳ ಮಾದರಿಗಳನ್ನು ಪ್ರದರ್ಶಿಸಬೇಕು.

    

  • ಇ-ಪಡಿತರ ಯಂತ್ರ/ ಪಾಯಿಂಟ್ ಆಫ್ ಸೇಲ್ (ಪಿ.ಓ.ಎಸ್.) ಯಂತ್ರ:
   ಸಬ್ಸಿಡಿಯುಕ್ತ ಆಹಾರಧಾನ್ಯವು ಮಾರ್ಗಾಂತರವಾಗುವುದನ್ನು ಹಾಗೂ ದುರುಪಯೋಗವಾಗುವುದನ್ನು ತಡೆಗಟ್ಟಲು ಜಿಲ್ಲೆಯ 532 ನ್ಯಾಯಬೆಲೆ ಅಂಗಡಿಗಳ ಪೈಕಿ  529 ನ್ಯಾಯಬೆಲೆ ಅಂಗಡಿಗಳಿಗೆ ಇ-ಪಡಿತರ ಯಂತ್ರಗಳನ್ನು ಸರಬರಾಜು ಮಾಡಲಾಗಿದೆ.  ಜಿಲ್ಲೆಯ 529 ನ್ಯಾಯಬೆಲೆ ಅಂಗಡಿಗಳಲ್ಲೂ ಇ-ಪಡಿತರ ಯಂತ್ರದ ಮೂಲಕವೇ  ಕಡ್ಡಾಯವಾಗಿ ಪಡಿತರ ವಿತರಿಸಲು ಕ್ರಮಕೈಗೊಳ್ಳಲಾಗಿದೆ.  ಇ-ಪಡಿತರ ಯಂತ್ರದ ವೈಶಿಷ್ಟ್ಯಗಳು ಈ ಕೆಳಕಂಡಂತಿರುತ್ತವೆ.

  • ಅಂಗಡಿಗೆ ಜೋಡಿಸಲಾದ ಎಲ್ಲಾ ಪಡಿತರ ಚೀಟಿಗಳ ಮಾಹಿತಿಯನ್ನು ಬಯೋಮೆಟ್ರಿಕ್ ಸಹಿತ ಯಂತ್ರದಲ್ಲಿ ಶೇಖರಿಸಲಾಗಿದೆ.
  • ಪಡಿತರ ಚೀಟಿದಾರ ಯಂತ್ರದ ಮೇಲೆ ಬೆರಳು ಇಟ್ಟಾಗ ಅವರ ಖಾತೆ ತೆರೆಯುತ್ತದೆ ಹಾಗೂ ವಿವರಗಳು ಸ್ಕ್ರೀನ್ ಮೇಲೆ ಮೂಡುತ್ತವೆ.
  • ಪಡಿತರ ಚೀಟಿಯ ವರ್ಗ ಹಾಗೂ ಸದಸ್ಯರ ಸಂಖ್ಯೆಯನ್ನಾಧರಿಸಿ ನೀಡಬೇಕಾದ ಒಟ್ಟು ಆಹಾರಧಾನ್ಯಗಳ ಪ್ರಮಾಣವನ್ನು ಅದು ನಿರ್ಧರಿಸುತ್ತದೆ.  ಅಂಗಡಿಯವರು ಆಹಾರಧಾನ್ಯಗಳನ್ನು ಕಡಿಮೆ ಪ್ರಮಾಣದಲ್ಲಿ ನೀಡಲು ಸಾಧ್ಯವಿಲ್ಲ.
  • ಯಂತ್ರದ ಮೇಲಿಟ್ಟ ಆಹಾರಧಾನ್ಯ ಎಷ್ಟಿದೆಯೋ ಅಷ್ಟೇ ತೂಕ ಹಾಗೂ ಅದರ ಬೆಲೆ ಬಿಲ್ ನಲ್ಲಿ ತಾನಾಗಿಯೇ ನಮೂದಾಗುತ್ತದೆ. ಅಂಗಡಿಯವರು ಬದಲಾಯಿಸಲು ಸಾಧ್ಯವಿಲ್ಲ.
  • ಧಾನ್ಯದ ಪ್ರಕಾರ (ಅಕ್ಕಿ, ಗೋಧಿ ಇತ್ಯಾದಿ) ತೂಕ, ಬೆಲೆ ಹಾಗೂ ಬಿಲ್ಲಿನ ಒಟ್ಟು ಮೊತ್ತವನ್ನು ಗ್ರಾಹಕರಿಗೆಂದೇ ನೀಡಲಾಗಿರುವ ಸ್ಕ್ರೀನ್ ಮೇಲೆ ತೋರಿಸುವುದಲ್ಲದೆ ಧ್ವನಿವರ್ಧಕದಿಂದ ಭಿತ್ತರಿಸುವ ಮೂಲಕ ಅನಕ್ಷರಸ್ಥರಿಗೂ ಸಹ ತಿಳಿಯುವಂತೆ ಮಾಡುತ್ತದೆ.
  • ವಿತರಣೆಯ ಮಾಹಿತಿಯನ್ನು ಕೂಡಲೇ ವೆಬ್ ಸೈಟ್ ಗೆ ರವಾನಿಸಿ ಪ್ರಪಂಚದ  ಯಾವುದೇ ಮೂಲೆಯಿಂದ ಯಾರು ಬೇಕಾದರೂ ಇಲಾಖೆಯ ವೆಬ್ ಸೈಟ್ ಗೆ ahara.kar.nic.in ಗೆ ಹೋಗಿ PDS Data Centre ಲಿಂಕ್ ಕ್ಲಿಕ್ ಮಾಡಿ ನೋಡಬಹುದು. ಇದರಿಂದ ಮೇಲ್ವಿಚಾರಣೆ ಸುಲಭ ಸಾಧ್ಯವಾಗುತ್ತದೆ ಹಾಗೂ ಉತ್ತರದಾಯಿತ್ವ ನಿರ್ಮಾಣವಾಗುತ್ತದೆ.

   

  ಪಡಿತರ ಖಾತರಿ ಯೋಜನೆ:
  ಸಾರ್ವಜನಿಕ ವಿತರಣಾ ಪದ್ಧತಿಯನ್ನು ಪರಿಣಾಮಕಾರಿಯಾಗಿ ಬಲಪಡಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣಾ ವ್ಯವಸ್ಥೆಯನ್ನು ನಿಯಮಬದ್ಧಗೊಳಿಸಲು  ಕೇಂದ್ರ ಸರ್ಕಾರವು ಆಹಾರ ಖಾತರಿ (ಪಡಿತರ ಖಾತರಿ) ಯೋಜನೆಯನ್ನು ಜಾರಿಗೆ ತಂದಿರುತ್ತದೆ.  ಸರ್ಕಾರದ ಆದೇಶ ಸಂ. ಆನಾಸ:368:ಡಿಆರ್ ಎ:2013 ಬೆಂಗಳೂರು ದಿನಾಂಕ 18.12.2013 ಪಡಿತರ ಖಾತರಿ ಯೋಜನೆಯನ್ನು  2014ನೇ ಫೆಬ್ರವರಿ 1ನೇ ತಾರೀಖಿನಿಂದ ಜಾರಿಗೆ ತರಲಾಗಿದೆ. 
  ಪಡಿತರ ಖಾತರಿ ಅವಧಿಯು ಪ್ರತಿ ಮಾಹೆಯ 1ನೇ ತಾರೀಖಿನಿಂದ 10 ತಾರೀಖಿನವರೆಗೆ ಇರುತ್ತದೆ. ಈ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 8.00 ಗಂಟೆಯಿಂದ  ರಾತ್ರಿ 8.00 ಗಂಟೆಯವರೆಗೆ (ಊಟದ ವೇಳೆ ಮಧ್ಯಾಹ್ನ 1.00 ರಿಂದ 2.00 ಗಂಟೆಯನ್ನು ಹೊರತುಪಡಿಸಿ) ಕಾರ್ಯನಿರ್ವಹಿಸುತ್ತವೆ.  ಈ ಹತ್ತು ದಿನಗಳಂದು ರಾಷ್ಟ್ರೀಯ ರಜಾ ದಿನಗಳನ್ನು ಹೊರತು ಪಡಿಸಿ (ಮಂಗಳವಾರವೂ ಒಳಗೊಂಡಂತೆ) ಯಾವುದೇ ರಜೆ ಇರುವುದಿಲ್ಲ. ನಂತರದ ದಿನಗಳಲ್ಲಿ ಅಂದರೆ 11ನೇ ತಾರೀಖಿನಿಂದ ನ್ಯಾಯಬೆಲೆ ಅಂಗಡಿಗಳು ನಿಗದಿತ ಅವಧಿಯಲ್ಲಿ  ಅಂದರೆ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಹಾಗೂ ಸಂಜೆ 4.00ಗಂಟೆಯಿಂದ ರಾತ್ರಿ 8.00ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ.
  ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದಲ್ಲಿ ಸಹಾಯವಾಣಿ ಸಂಖ್ಯೆ 1967ಕ್ಕೆ ದೂರನ್ನು ಸಲ್ಲಿಸಬಹುದಾಗಿರುತ್ತದೆ.

   

  ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿ ವಿತರಣೆ:
  ಹೊಸ ಪಡಿತರ ಚೀಟಿಗಾಗಿ ಪಟ್ಟಣ/ನಗರ ಪ್ರದೇಶಗಳಲ್ಲಿ ಇಲಾಖೆಯಿಂದ  ನೇಮಿಸಲ್ಪಟ್ಟ ಫ್ರಾಂಚೈಸಿಗಳ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವವರು ಸಂಬಂಧಿಸಿದ ಗ್ರಾಮಪಂಚಾಯಿತಿಗಳಲ್ಲಿ  ಅರ್ಜಿ ಸಲ್ಲಿಸಬೇಕಾಗಿರುತ್ತದೆ.  ಅರ್ಜಿ ಸಲ್ಲಿಸುವವರು ಈ ಕೆಳಕಂಡ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.

  1. ಅರ್ಜಿದಾರರು ವಾಸವಾಗಿರುವ ಮನೆಯ ಇತ್ತೀಚಿನ ವಿದ್ಯತ್ ಬಿಲ್ಲು.
  2. ಅರ್ಜಿದಾರರು ಸ್ವಂತ ಮನೆಯಲ್ಲಿ ವಾಸವಿದ್ದರೆ ಕಂದಾಯ ಪಾವತಿಸಿದ ರಸೀದಿ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ಬಾಡಿಕೆ ಕರಾರು ಪತ್ರ.
  3. ಅರ್ಜಿದಾರರ ಅಥವಾ ಅವರ ಕುಟುಂಬದ ಸದಸ್ಯರೊಬ್ಬರ ಫೋಟೋ ಇರುವ ಗುರುತಿನ ವಿಳಾಸ ದಾಖಲೆ ಪತ್ರ. (ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡು, ಚುನಾವಣಾ ಗುರುತಿನ ಚೀಟಿ)
  4. ಅರ್ಜಿದಾರರ ಅಥವಾ ಅವರ ಕುಟುಂಬದ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್ ಫೋನ್.

   

  ನಗರ/ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಆನ್ ಲೈನ್ ಮೂಲಕ ಸಲ್ಲಿಸಲ್ಪಟ್ಟ ಅರ್ಜಿಗಳನ್ನು ನಗರಸಭೆ/ಪುರಸಭೆ/ ಪಟ್ಟಣ ಪಂಚಾಯಿತಿಯ  ಬಿಲ್ ಕಲೆಕ್ಟರ್ ಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ ವರದಿ ಪಡೆದು, ಸದರಿ ವರದಿಗಳನ್ನು ಆಹಾರ ನಿರೀಕ್ಷಕರು ಪರಿಶೀಲಿಸಿ ಅರ್ಹರಿಗೆ ಬಯೋಮೆಟ್ರಿಕ್ ಪಡೆದು ಪಡಿತರ ಚೀಟಿ ವಿತರಿಸಲಾಗುತ್ತದೆ.  
  ಗ್ರಾಮಾಂತರ ಪ್ರದೇಶಗಳಲ್ಲಿ ಸ್ವೀಕರಿಸಲ್ಪಟ್ಟ ಅರ್ಜಿಗಳನ್ನು  ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ನೇಮಿಸಿರುವ ಎಫ್.ಎಲ್.ಓ.ಗಳ (ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು/ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು)  ಮೂಲಕ ಹಾಗೂ ಆಹಾರ ನಿರೀಕ್ಷಕರ ಮೂಲಕ ತನಿಖೆ ನಡೆಸಿ  ಅರ್ಹರಿಗೆ ಬಯೋಮೆಟ್ರಿಕ್ ಪಡೆದು ಆಯಾ ತಾಲ್ಲೂಕು ಕಛೇರಿಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತದೆ.

   

  ಮಾಹಿತಿ ಹಕ್ಕು ಅಧಿನಿಯಮ 2005:

              ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಾಹಿತಿ ಹಕ್ಕು ಅಧಿನಿಯಮ 2005ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಮಾಹಿತಿ ಹಕ್ಕು ಅಧಿನಿಯಮ 2005 (Central Act 22 of 2005) ಸೆಕ್ಷನ್ 5(1),

  5(2) ಮತ್ತು 19(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ  ಸೇರಿದ ಚಿಕ್ಕಮಗಳೂರು ಉಪ ನಿರ್ದೇಶಕರ ಕಛೇರಿಯ ವ್ಯಾಪ್ತಿಯ ಮಾಹಿತಿಯನ್ನು ಕೋರುವ ವ್ಯಕ್ತಿಗಳಿಗೆ ಅಂತಹ ಮಾಹಿತಿಯನ್ನು ಮೇಲೆನ ಕಾಯ್ದೆಯನ್ವಯ ಒದಗಿಸಲು, ಮಾಹಿತಿ ಕೋರುವ ಅರ್ಜಿಗಳು ಅಥವಾ ಮೇಲ್ಮನವಿಗಳನ್ನು ಸ್ವೀಕರಿಸಲು ಅನುಕ್ರಮವಾಗಿ  ಸಾರ್ವಜನಿಕ  ಮಾಹಿತಿ ಅಧಿಕಾರಿ,  ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳನ್ನಾಗಿ  ಈ ಕೆಳಕಂಡಂತೆ ನೇಮಿಸಲಾಗಿದೆ.


  ಸಾರ್ವಜನಿಕ ಪ್ರಾಧಿಕಾರಿಗಳ ಕಛೇರಿ

  ಸಾರ್ವಜನಿಕ ಮಾಹಿತಿ ಅಧಿಕಾರಿ

  ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

  ಮೇಲ್ಮನವಿ ಅಧಿಕಾರಿ

  ಉಪ ನಿರ್ದೇಶಕರ ಕಛೇರಿ

  ಉಪ ನಿರ್ದೇಶಕರು,
  ಆಹಾರ, ನಾಗರಿಕ ಸರಬರಾಜು ಮತ್ತು
  ಗ್ರಾಹಕರ ವ್ಯವಹಾರಗಳ ಇಲಾಖೆ,
  ಚಿಕ್ಕಮಗಳೂರು.

  ಸಹಾಯಕ ನಿರ್ದೇಶಕರು,
  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ,
  ಚಿಕ್ಕಮಗಳೂರು.

  ಜಿಲ್ಲಾಧಿಕಾರಿಗಳು,
  ಚಿಕ್ಕಮಗಳೂರು ಜಿಲ್ಲೆ,
  ಚಿಕ್ಕಮಗಳೂರು.

  ತಾಲ್ಲೂಕು ಕಛೇರಿಯ ಆಹಾರ ಶಾಖೆ

  ತಾಲ್ಲೂಕಿನ ತಹಶೀಲ್ದಾರ್

  ತಾಲ್ಲೂಕುಗಳ ಆಹಾರ ಶಿರಸ್ತೇದಾರ್

  ಜಿಲ್ಲಾಧಿಕಾರಿಗಳು,
  ಚಿಕ್ಕಮಗಳೂರು ಜಿಲ್ಲೆ,
  ಚಿಕ್ಕಮಗಳೂರು.

              ಮಾಹಿತಿಯನ್ನು ಪಡೆಯಲು ಇಚ್ಛಿಸುವ ಯಾರೇ ವ್ಯಕ್ತಿಯು ಸದರಿ ಅಧಿನಿಯಮದಲ್ಲಿ ಗೊತ್ತುಪಡಿಸಲಾಗಿರುವಂತೆ ಮೇಲ್ಕಂಡ ಸಕ್ಷಮ  ಪ್ರಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.

  ಜಾಗೃತ ಸಮಿತಿ:
  ಸರ್ಕಾರದ ಆದೇಶ ಸಂ. ಆನಾಸ:144:ಡಿಆರ್ ಎ:2013 ಬೆಂಗಳೂರು ದಿನಾಂಕ 26.10.2013ರಲ್ಲಿ ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತ ಸಮಿತಿಯನ್ನು ರಚಿಸಲಾಗಿದೆ. ಜಾಗೃತ ಸಮಿತಿಯಲ್ಲಿ 5 ಜನ ಸದಸ್ಯರಿರಬೇಕು. ನಾಮನಿರ್ದೇಶನ ಮಾಡುವ ಐದು ಸದಸ್ಯರುಗಳ ಪೈಕಿ ಇಬ್ಬರು ಮಹಿಳಾ ಸದಸ್ಯರು ಗಳಿರಬೇಕು ಹಾಗೂ ಅವರುಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಇನ್ನುಳಿದ ಮೂರು ಸದಸ್ಯರುಗಳ ಪೈಕಿ ಒಬ್ಬ ಸದಸ್ಯರು  ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು. ಉಳಿದ ಇತರೆ ಸದಸ್ಯರುಗಳು ಸ್ವಸಹಾಯ ಸಂಸ್ಥೆಗಳಿಂದ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನಂತಿರಬೇಕು.
  ಜಿಲ್ಲಾ ಜಾಗೃತ ಸಮಿತಿ:


  1.ಜಿಲ್ಲಾ ಉಸ್ತುವಾರಿ ಸಚಿವರು

  ಅಧ್ಯಕ್ಷರು

  2.ಜಿಲ್ಲಾ ಪಂಚಾಯಿತಿ ಅಧ್ಯಕ್ಷರು

  ಉಪಾಧ್ಯಕ್ಷರು

  3. ಜಿಲ್ಲಾಧಿಕಾರಿಗಳು

  ಸದಸ್ಯರು

  4. ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು

  ಸದಸ್ಯರು

  5. ಇಬ್ಬರು ಮಹಿಳಾ ಸದಸ್ಯರು

  2 ಸದಸ್ಯರು

  6. ಮೂರು ಸದಸ್ಯರ ಪೈಕಿ ಒಂದು ಹಿಂದುಳಿದ ವರ್ಗಕ್ಕೆ ಸೇರಿರಬೇಕು ಹಾಗೂ ಉಳಿದ ಇತರೆ ಸದಸ್ಯರುಗಳು ಸ್ವಸಹಾಯ ಸಂಸ್ಥೆಗಳಿಂದ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನಂತಿರಬಹುದು

  3 ಸದಸ್ಯರು

  7. ಜಿಲ್ಲಾ ಆಹಾರ ಉಪ ನಿರ್ದೇಶಕರು/ಸಹಾಯಕ ನಿರ್ದೇಶಕರು

  ಸದಸ್ಯ ಕಾರ್ಯದರ್ಶಿ

        

        ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತ ಸಮಿತಿಯು ನ್ಯಾಯಬೆಲೆ ಅಂಗಡಿಯಲ್ಲಿ ಲಭ್ಯವಿರುವ ದಾಸ್ತಾನನ್ನು ಹಾಗೂ ವಿತರಣೆಯ ಮೇಲುಸ್ತುವಾರಿ ಮಾಡತಕ್ಕದ್ದು. ಪಡಿತರ ಚೀಟಿಯನ್ನು ಅರ್ಹ ಫಲಾನುಭವಿಗಳಿಗೆ ನೀಡದಿರು ವುದೇನಾದರೂ ಕಂಡುಬಂದಲ್ಲಿ  ಆಹಾರ ನಿರೀಕ್ಷಕರ ಗಮನಕ್ಕೆ ತರುವುದು. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ  ಜಾಗೃತ ಸಮಿತಿಯು ಜಿಲ್ಲೆಯ ಎಲ್ಲಾ  ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಗಟು ಮಳಿಗೆಗೆ ಎತ್ತುವಳಿ, ಸ್ವೀಕೃತವಾಗಿರುವ ಹೊಸ ಅರ್ಜಿಗಳನ್ನು  ಅನುಮೋದಿತ/ತಿರಸ್ಕೃತ ಹಾಗೂ ಕೈಬಿಡಲಾಗಿರುವ ನಕಲಿ ಪಡಿತರ ಚೀಟಿಗಳನ್ನು ಮೇಲುಸ್ತುವಾರಿ ಮಾಡತಕ್ಕದ್ದು. ರಾಜ್ಯದ ಅನ್ನಭಾಗ್ಯ ಯೋಜನೆಯನ್ನು ಬಲಪಡಿಸಲು ಸಲಹೆಗಳನ್ನು ನೀಡಬಹುದು. ಈ ಸಮಿತಿ ಅಧಿಕಾರ ಅವಧಿಯು ರಚನೆಗೊಂಡ ದಿನಾಂಕದಿಂದ ಒಂದು ವರ್ಷವಾಗಿರುತ್ತದೆ.

   

  ಸಾರ್ವಜನಿಕ ಕುಂದುಕೊರತೆಗಳ ವಿಭಾಗ/ಜನಸ್ಪಂದನ ಕೋಶ:
  ಸಾರ್ವಜನಿಕ ಕುಂದುಕೊರತೆಯ ನಿವಾರಣೆಗಾಗಿ ಇಲಾಖೆಯಲ್ಲಿ ಜನಸ್ಪಂದನಾ ಕೋಶ ಕಾರ್ಯನಿರ್ವಹಿಸುತ್ತಿದೆ. ಅರ್ಜಿಗಳ ಬಗ್ಗೆ ತ್ವರಿತವಾಗಿ ಕ್ರಮತೆಗೆದುಕೊಂಡು ತಕ್ಷಣ ಅರ್ಜಿದಾರರಿಗೆ ಹಿಂಬರಹ ನೀಡಿ ಸಂಬಂಧಪಟ್ಟವರಿಂದ ಉತ್ತರ ಪಡೆದ ನಂತರ ವಿವರ ಒದಗಿಸಲಾಗುವುದು.  ಪ್ರತಿ ತಿಂಗಳ ಮೊದಲನೇ ಶನಿವಾರ ಸಾರ್ವಜನಿಕ ಕುಂದುಕೊರತೆ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುತ್ತಿದೆ.

   

  ಆಹಾರ ಅದಾಲತ್:
  ಪಡಿತರ ಚೀಟಿದಾರರ ಕುಂದುಕೊರತೆಗಳನ್ನು ಆಲಿಸಿ ಪರಿಹಾರವನ್ನು ತ್ವರಿತವಾಗಿ ಒದಗಿಸಿಕೊಡಲು ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಆಹಾರ ಅದಾಲತ್ ಗಳನ್ನು ನಡೆಸಲು ಗುರಿ ನಿಗದಿಪಡಿಸಲಾಗಿದೆ. ಮಾನ್ಯ ಆಯುಕ್ತರ ಕಛೇರಿ ಸುತ್ತೋಲೆ ಸಂ. ಎಫ್ ಸಿ ಎಸ್:ಎಸ್ ಟಿಟಿ:2:2013-14 ದಿನಾಂಕ 20.01.2014ರ ಸುತ್ತೋಲೆ ಯಂತೆ ಆಹಾರ ಅದಾಲತ್ ನಡೆಸುವ ನೋಡಲ್ ಅಧಿಕಾರಿಗಳು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ.
  1) ಪಡಿತರ ಚೀಟಿ ಹಾಗೂ ನ್ಯಾಯಬೆಲೆ ಅಂಗಡಿಗಳ ಬಗ್ಗೆ ದೂರು.
  2)ನ್ಯಾಯಬೆಲೆ ಅಂಗಡಿಗಳು ವಿತರಿಸುವ ಪಡಿತರ ಪದಾರ್ಥಗಳ ಗುಣಮಟ್ಟ, ದರ ಹಾಗೂ ವಿತರಣಾ ಪ್ರಮಾಣದ ಬಗ್ಗೆ ಪರಿಶೀಲನೆ.
  3)ಸೀಮೆಎಣ್ಣೆ ವಿತರಣೆಯಲ್ಲಿನ ತೂಕ ಮತ್ತು ಅಳತೆಗಳ ಪರಿಶೀಲನೆ.
  4) ನಿಗದಿತ ಅವಧಿಯಲ್ಲಿ  ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ.
  5)ಜಾಗೃತ ಸಮಿತಿಗಳ ಕಾರ್ಯನಿರ್ವಹಣೆಗಳ ಬಗ್ಗೆ ಪರಿಶೀಲನೆ.
  6) ಪ್ರತಿ ಮಾಹೆ 7ನೇ ತಾರೀಖಿನಂದು ನ್ಯಾಯಬೆಲೆ ಅಂಗಡಿಗೆ ನೋಡಲ್ ಅಧಿಕಾರಿಗಳೂ ಭೇಟಿ ನೀಡಿ ಸುಮಾರು 50 ಕಾರ್ಡುದಾರರನ್ನು ಭೇಟಿ ಮಾಡಿ ಸದರಿಯವರು ಪಡೆದಿರುವ ಪಡಿತರ ಪದಾರ್ಥಗಳ ದರ ಮತ್ತು ಪ್ರಮಾಣವನ್ನು ಪರಿಶೀಲಿಸಲು ಸೂಚಿಸಲಾಗಿದೆ.

   

  ಕನಿಷ್ಠ ಬೆಂಬಲ ಬೆಲೆ ಯೋಜನೆ:
  ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯನ್ನು  ದೊರಕಿಸಿಕೊಡಲು ಮಾರುಕಟ್ಟೆಯಲ್ಲಿ ಆಹಾರಧಾನ್ಯಗಳ ಬೆಲೆ ಕುಸಿತವಾದಾಗ ಸರ್ಕಾರವು ಮಧ್ಯ ಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಸರ್ಕಾರವೇ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಿಂದಾಗಿ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಒದಗಿಸಲು ಸಾಧ್ಯವಾಗುತ್ತಿದೆ.  ಹಾಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕಜೋಳ, ಭತ್ತ, ರಾಗಿ/ಬಿಳಿಜೋಳಗಳನ್ನು ಕೆ.ಎಫ್.ಸಿ.ಎಸ್.ಸಿ. ಯ ಮೂಲಕ ಖರೀದಿಸಲಾಗುತ್ತಿದೆ.

   

  ಲೆವಿ ಸಂಗ್ರಹಣೆ:
  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕಿಗಿರಣಿಗಳು ಹಿಂದಿನ ವರ್ಷದಲ್ಲಿ ಬಳಸುವ ವಿದ್ಯುಚ್ಛಕ್ತಿ ಯುನಿಟ್ ಆಧಾರದ ಮೇಲೆ ಪ್ರತಿ ಅಕ್ಕಿಗಿರಣಿಗೆ ಮಾನ್ಯ ಆಯುಕ್ತರ ಕಛೇರಿಗೆ ಲೆವಿ ಅಕ್ಕಿ ಗುರಿನಿಗದಿಪಡಿಸಲಾಗುತ್ತದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಅಕ್ಕಿಗಿರಣಿಗಳ ಮಾಲೀಕರ ಸಭೆ ಕರೆದು, ನಿಗದಿ ಪಡಿಸಿದ ಗುರಿಯಂತೆ ಲೆವಿ ಅಕ್ಕಿ ಸಂದಾಯ ಮಾಡಲು ಸೂಚಿಸಲಾಗುತ್ತದೆ. ಕೆ.ಎಫ್.ಸಿ.ಎಸ್.ಸಿ. ವತಿಯಿಂದ ತೆರೆಯುವ ಲೆವಿ ಖರೀದಿ ಕೇಂದ್ರಗಳಲ್ಲಿ ಅಕ್ಕಿಗಿರಣಿಗಳವರು ನಿಗದಿತ ಗುರಿಯಂತೆ ಲೆವಿ ಅಕ್ಕಿ ಸಂದಾಯ ಮಾಡುತ್ತಾರೆ.  ಲೆವಿ ಅಕ್ಕಿ ಸಂಗ್ರಹಣಾ ಕೇಂದ್ರದಲ್ಲಿ ಸಂಗ್ರಹವಾಗುವ ಅಕ್ಕಿಯನ್ನು   ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತದೆ.

   

  ಗ್ರಾಹಕ ಸಂರಕ್ಷಣಾ ಕಾಯ್ದೆ 1986:

              ಸಾರ್ವಜನಿಕರಿಗೆ ಕಾನೂನಿನ ಸಮರ್ಪಕ ಅರಿವಿಲ್ಲದೆ   ದಿನನಿತ್ಯದ ಜೀವನದಲ್ಲಿ ಅನೇಕರು ಕಾನೂನಿನಡಿ ಕೊಡಮಾಡಿದ ಹಕ್ಕು ಹಾಗೂ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅನೇಕ ಸಮಸ್ಯೆಗಳಿಗೆ, ಆರ್ಥಿಕ ನಷ್ಟಕ್ಕೆ ಒಳಗಾಗುತ್ತಾರೆ. ಅಂಥವರಿಗೆ ನಿತ್ಯ ಜೀವನದಲ್ಲಿ ಅನ್ಯಾಯವಾಗುವುದನ್ನು ತಡೆಗಟ್ಟಲು  ಇಲಾಖೆಯ ವತಿಯಿಂದ ಸಾರ್ವಜನಿಕರ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅರಿವು ಮೂಡಿಸಿ ಅವರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಹಕರಲ್ಲಿ ಅರಿವು ಮೂಡಿಸಲು ಇಲಾಖೆಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
  1) ಜಿಲ್ಲಾ ಗ್ರಾಹಕ ಪರಿಷತ್ ರಚನೆ.
  2) ಪ್ರತಿ ವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸುವುದು.
  3) ಪ್ರತಿ ವರ್ಷ ಮಾರ್ಚ್ 15ರಂದು ವಿಶ್ವ ಗ್ರಾಹಕರ ದಿನಾಚರಣೆ ಆಚರಿಸುವುದು.

   

  ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2011:
  ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2011ರಡಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ  ಸೇವೆಗಳನ್ನು ನೀಡಲಾಗುತ್ತಿದೆ.
  1.ಪಡಿತರ ಚೀಟಿ  [ಉಪ ಸೇವೆಗಳು: 1) ಬೇರೆ ರಾಜ್ಯ/ಜಿಲ್ಲೆ/ತಾಲ್ಲೂಕಿಗೆ ಪಡಿತರ ಚೀಟಿ ವರ್ಗಾವಣೆ 2) ಸದಸ್ಯರ ಹೆಸರನ್ನು ತೆಗೆಯುವುದು 3) ದ್ವಿಪ್ರತಿ ಪಡಿತರ ಚೀಟಿ 4) ಸ್ಥಳಿಯ ಪ್ರದೇಶ/ತಾಲ್ಲೂಕಿನಲ್ಲಿ ವಿಳಾಸ ಬದಲಾವಣೆ 5) ಸದಸ್ಯರ ಹೆಸರು ಸೇರಿಸುವುದು 6) ಆಧ್ಯರ್ಪಣ ಪತ್ರದಂತೆ ಹೊಸ ಪಡಿತರ ಚೀಟಿ ವಿತರಣೆ]
  2. ಆಹಾರಧಾನ್ಯಗಳು, ಬೇಳೆಕಾಳು, ಖಾದ್ಯತೈಲ ಮತ್ತು ಸೀಮೆಎಣ್ಣೆಗಳ ಸಗಟು ವ್ಯಾಪಾರಿಗಳಿಗೆ ಕರ್ನಾಟಕ ಅವಶ್ಯಕ ವಸ್ತುಗಳ ಲೈಸೆನ್ಸ್ ನೀಡುವ  ಆದೇಶ 1986ರಡಿಯಲ್ಲಿ ಲೈಸೆನ್ಸ್ ನೀಡುವುದು.
  3. ಆಹಾರಧಾನ್ಯಗಳು, ಬೇಳೆಕಾಳು, ಖಾದ್ಯತೈಲ ಮತ್ತು ಸೀಮೆಎಣ್ಣೆಗಳ ಚಿಲ್ಲರೆ  ವ್ಯಾಪಾರಿಗಳಿಗೆ ಕರ್ನಾಟಕ ಅವಶ್ಯಕ ವಸ್ತುಗಳ ಲೈಸೆನ್ಸ್ ನೀಡುವ  ಆದೇಶ 1986ರಡಿಯಲ್ಲಿ ಲೈಸೆನ್ಸ್ ನೀಡುವುದು.
  4.ಕರ್ನಾಟಕ ಅವಶ್ಯಕ ವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ)  ನಿಯಂತ್ರಣ ಆದೇಶ 1992ರಡಿಯಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ನಡೆಸುವುದಕ್ಕೆ ಪ್ರಾಧಿಕಾರವನ್ನು ನೀಡುವುದು.

   

  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರಧಾನ್ಯ ಸಗಟು ನಾಮಿನಿದಾರರ ವಿವರ:


  ಕ್ರ.
  ಸಂ.

  ತಾಲ್ಲೂಕಿನ ಹೆಸರು

  ಸಗಟು ನಾಮಿನಿದಾರರ ವಿವರ

  1

  ಚಿಕ್ಕಮಗಳೂರು ಅನೌಪಚಾರಿಕ ಪಡಿತರ  ಪ್ರದೇಶ

  ಕೆ.ಎಫ್.ಸಿ.ಎಸ್.ಸಿ., ಚಿಕ್ಕಮಗಳೂರು

  2

  ಚಿಕ್ಕಮಗಳೂರು ಗ್ರಾಮಾಂತರ

  ಟಿ.ಎ.ಪಿ.ಸಿ.ಎಂ.ಎಸ್.ಚಿಕ್ಕಮಗಳೂರು

  3

  ಕಡೂರು

  ಕೆ.ಎಫ್.ಸಿ.ಎಸ್.ಸಿ., ಕಡೂರು-1
  ಕೆ.ಎಫ್.ಸಿ.ಎಸ್.ಸಿ., ಕಡೂರು-2
  ಕೆ.ಎಫ್.ಸಿ.ಎಸ್.ಸಿ., ಬೀರೂರು(ಪಟ್ಟಣ)

  4

  ತರೀಕೆರೆ

  ಟಿ.ಎ.ಪಿ.ಸಿ.ಎಂ.ಎಸ್. ತರೀಕೆರೆ
  ಕೆ.ಎಫ್.ಸಿ.ಎಸ್.ಸಿ., ತರೀಕೆರೆ

  5

  ಮೂಡಿಗೆರೆ

  ಟಿ.ಎ.ಪಿ.ಸಿ.ಎಂ.ಎಸ್. ಮೂಡಿಗೆರೆ

  6

  ಕೊಪ್ಪ

  ಟಿ.ಎ.ಪಿ.ಸಿ.ಎಂ.ಎಸ್. ಕೊಪ್ಪ

  7

  ಶೃಂಗೇರಿ

  ಕೆ.ಎಫ್.ಸಿ.ಎಸ್.ಸಿ., ಶೃಂಗೇರಿ

  8

  ನರಸಿಂಹರಾಜಪುರ

  ಕೆ.ಎಫ್.ಸಿ.ಎಸ್.ಸಿ., ನರಸಿಂಹರಾಜಪುರ

   

  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೀಮೆಎಣ್ಣೆ ಸಗಟು ನಾಮಿನಿದಾರರ ವಿವರ:


  ಕ್ರ.
  ಸಂ.

  ತಾಲ್ಲೂಕಿನ ಹೆಸರು

  ಸಗಟು ಸೀಮೆಎಣ್ಣೆ ನಾಮಿನಿದಾರರ ವಿವರ

  ಕಂಪೆನಿ

  1

  ಚಿಕ್ಕಮಗಳೂರು

  1)ಮೆ: ರವಿ ಎಂಟರ್ ಪ್ರೈಸಸ್, ಚಿಕ್ಕಮಗಳೂರು

  ಹೆಚ್.ಪಿ.ಸಿ.

  2)ಮೆ:ಎಸ್.ವಿ. ರತ್ನಸ್ವಾಮಿ ಅಂಡ್ ಸನ್ಸ್, ಚಿಕ್ಕಮಗಳೂರು

  ಬಿ.ಪಿ.ಸಿ.

  2

  ಕಡೂರು

  1)ಮೆ: ಎಂ.ಶ್ರೀನಿವಾಸರಂಗಯ್ಯ ಅಂಡ್ ಸನ್ಸ್, ಕಡೂರು

  ಹೆಚ್.ಪಿ.ಸಿ.

  3

  ತರೀಕೆರೆ

  1)ಮೆ:ಸೈಂಟ್ ಜೋಸೆಫ್ ಎಂಟರ್ ಪ್ರೈಸಸ್, ತರೀಕೆರೆ

  ಐ.ಓ.ಸಿ.

  4

  ಮೂಡಿಗೆರೆ

  1)ಮೆ: ಮುರುಘರಾಜೇಂದ್ರ ಟ್ರೇಡಿಂಗ್ ಕಂಪೆನಿ, ಮೂಡಿಗೆರೆ

  .

  5

  ನರಸಿಂಹರಾಜಪುರ

  1)ಮೆ: ಸೌಮ್ಯ ಎಂಟರ್ ಪ್ರೈಸಸ್, ನರಸಿಂಹರಾಜಪುರ

  .

   

  ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿ/ಚಿಲ್ಲರೆ ಸೀಮೆಎಣ್ಣೆ ಪ್ರಾಧಿಕಾರಿಗಳ ವಿವರ


  ಕ್ರ.
  ಸಂ.

  ತಾಲ್ಲೂಕಿನ ಹೆಸರು

  ನ್ಯಾಯಬೆಲೆ ಅಂಗಡಿಗಳ ಸಂಖ್ಯೆ

  ಚಿಲ್ಲರೆ ಸೀಮೆಎಣ್ಣೆ ಮಳಿಗೆಗಳ ಸಂಖ್ಯೆ

  1

  ಚಿಕ್ಕಮಗಳೂರು ಅನೌಪಚಾರಿಕ ಪಡಿತರ  ಪ್ರದೇಶ

  32

  62

  2

  ಚಿಕ್ಕಮಗಳೂರು ಗ್ರಾಮಾಂತರ

  81

  36

  3

  ಕಡೂರು

  142

  115

  4

  ತರೀಕೆರೆ

  79

  66

  5

  ಮೂಡಿಗೆರೆ

  63

  13

  6

  ಕೊಪ್ಪ

  43

  0

  7

  ಶೃಂಗೇರಿ

  20

  0

  8

  ನರಸಿಂಹರಾಜಪುರ

  32

  4

   

  ಒಟ್ಟು

  492

              296

   

  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ಯಾಸ್ ಏಜೆನ್ಸಿಗಳ ವಿವರ:


  ಕ್ರ.
  ಸಂ.

  ತಾಲ್ಲೂಕಿನ ಹೆಸರು

  ಗ್ಯಾಸ್ ಏಜೆನ್ಸಿ ಹೆಸರು

  1

  ಚಿಕ್ಕಮಗಳೂರು

  1. ಶಿವಾನಿಲ್ ಗ್ಯಾಸ್ ಏಜೆನ್ಸಿ, ಚಿಕ್ಕಮಗಳೂರು
  2. ತೆರದಾಳ್ ಗ್ಯಾಸ್ ಏಜೆನ್ಸಿ, ಚಿಕ್ಕಮಗಳೂರು

  2

  ಕಡೂರು

  1. ವಿಷ್ಣುಪ್ರಸಾದ್ ಗ್ಯಾಸ್ ಏಜೆನ್ಸಿ, ಕಡೂರು
  2. ರುದ್ರೇಶ್ವರ ಗ್ಯಾಸ್ ಏಜೆನ್ಸಿ, ಬೀರೂರು

  3

  ತರೀಕೆರೆ

  1. ವಿನಯ್ ಗ್ಯಾಸ್ ಏಜೆನ್ಸಿ, ತರೀಕೆರೆ
  2. ಸಿ.ಎಸ್.ಆರ್. ಇಂಡೇನ್ ಗ್ಯಾಸ್ ಏಜೆನ್ಸಿ, ಅಜ್ಜಂಪುರ

  4

  ಮೂಡಿಗೆರೆ

  1) ವೆಂಕಟೇಶ್ವರ ಗ್ಯಾಸ್ ಏಜೆನ್ಸಿ, ಮೂಡಿಗೆರೆ.
  2) ಕೆ ಎಫ್ ಸಿ ಎಸ್ ಸಿ ಗ್ಯಾಸ್ ಏಜೆನ್ಸಿ, ಕುದುರೆಮುಖ

  5

  ಕೊಪ್ಪ

  1) ದಾಮೋದರ ಇಂಡೇನ್ ಗ್ಯಾಸ್ ಏಜೆನ್ಸಿ, ಕೊಪ್ಪ

  6

  ಶೃಂಗೇರಿ

  __

  7

  ನರಸಿಂಹರಾಜಪುರ

  1) ಮಹಾಲಸ ಗ್ಯಾಸ್ ಏಜೆನ್ಸಿ, ನರಸಿಂಹರಾಜಪುರ

   

  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್, ಲ್ಯೂಬ್ರಿಕೆಂಟ್ ಮಾರಾಟ ಗಾರರು ಹಾಗೂ ಅಕ್ಕಿಗಿರಣಿಗಳ ವಿವರ:


  ಕ್ರ.
  ಸಂ.

  ತಾಲ್ಲೂಕಿನ ಹೆಸರು

  ಪೆಟ್ರೋಲ್
  ಬಂಕ್

  ಲ್ಯೂಬ್ರಿಕೆಂಟ್
  ಮಾರಾಟಗಾರರು

  ಅಕ್ಕಿ
  ಗಿರಣಿಗಳು

  1

  ಚಿಕ್ಕಮಗಳೂರು

  15

  25

  7

  2

  ಕಡೂರು

  7

  0

  1

  3

  ತರೀಕೆರೆ

  10

  16

  9

  4

  ಮೂಡಿಗೆರೆ

  7

  0

  9

  5

  ಕೊಪ್ಪ

  7

  0

  19

  6

  ಶೃಂಗೇರಿ

  3

  3

  10

  7

  ನರಸಿಂಹರಾಜಪುರ

  4

  0

  10

   

  ಒಟ್ಟು

  53

  44

  65

   

  For Furthur Details / Suggestions, Contact  :-

  Deputy Director,

  Food , Civil Supplies  & Consumer Affairs Department,

  Deputy Commissioner's Office Building,

  Chickmagalur - 1

  Phone : 08262 235261 .

 

up